ಟೊಮೆಟೊ ಬೆಲೆ ಮತ್ತೆ ಏರಿಕೆ - ದೆಹಲಿಯಲ್ಲಿ 1 ಕೆಜಿಗೆ 259 ರೂ.!

ಟೊಮೆಟೊ ಬೆಲೆ ಮತ್ತೆ ಏರಿಕೆ - ದೆಹಲಿಯಲ್ಲಿ 1 ಕೆಜಿಗೆ 259 ರೂ.!

ನವದೆಹಲಿ: ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದ್ದು, ಚಿಲ್ಲರೆ ಮಾರಾಟದಲ್ಲಿ ಬುಧವಾರ ಪ್ರತಿ ಕೆಜಿಗೆ 203 ರೂಪಾಯಿ ತಲುಪಿದೆ. 

ದೆಹಲಿಯ ಮದರ್ ಡೈರಿಯ ಸಫಲ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ, ಟೊಮೆಟೊವನ್ನು ಪ್ರತಿ ಕೆಜಿಗೆ 259 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಮತ್ತು ಕಡಿಮೆ ಪೂರೈಕೆಯು ಬೆಲೆ ಏರಿಕೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಈ ಹಿಂದೆ ದೆಹಲಿ-ಎನ್‌ಸಿಆರ್‌ನಲ್ಲಿ ಟೊಮೆಟೊ ಸಬ್ಸಿಡಿ ದರವನ್ನು ಪ್ರತಿ ಕೆಜಿಗೆ 90 ರೂಪಾಯಿಂದ 80 ರೂಪಾಯಿಗೆ ಇಳಿಸಿತ್ತು.