ಮತ್ತೆ ಕೈಕೊಟ್ಟ 'ಎಕ್ಸ್'.! : ಭಾರತ ಸೇರಿ ವಿಶ್ವದಾದ್ಯಂತ ಸರ್ವರ್ ಡೌನ್ - ಬಳಕೆದಾರರು ಪರದಾಟ
ಬೆಂಗಳೂರು: ಸಾಮಾಜಿಕ ಮಾಧ್ಯಮ ವೇದಿಕೆ, ಇಲಾನ್ ಮಸ್ಕ್ ಒಡೆತದನ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಭಾರತ ಸೇರಿದಂತೆ ವಿಶ್ವದಾದ್ಯಂತ ಶನಿವಾರ ಕೆಲಕಾಲ ಸ್ಥಗಿತಗೊಂಡಿದೆ. ಇದರಿಂದಾಗಿ ಬಳಕೆದಾರರು ಪರದಾಡುವಂತೆ ಮಾಡಿದೆ.
ಡೌನ್‌ಡಿಟೆಕ್ಟರ್ ವರದಿ ಪ್ರಕಾರ, ಭಾರತೀಯ ಕಾಲಮಾನ ಶನಿವಾರ ಸಂಜೆ 6ಕ್ಕೆ ಎಕ್ಸ್ ತನ್ನ ಕಾರ್ಯ ಸ್ಥಗಿತಗೊಳಿಸಿದೆ.
ಬಳಕೆದಾರರು ಸೈನ್ ಇನ್ ಮಾಡುವಲ್ಲಿ ತೊಂದರೆ ಮತ್ತು ನೇರ ಸಂದೇಶಗಳನ್ನು ಸ್ವೀಕರಿಸದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸಿದರು. ಡೆಸ್ಕ್‌ಟಾಪ್ ಮತ್ತು ಮೊಬೈಲ್ ಸಾಧನಗಳಲ್ಲಿ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಪ್ರಯತ್ನಿಸುತ್ತಿರುವ ಅನೇಕ ಜನರಿಗೆ ಈ ಸ್ಥಗಿತವು ಅನಾನುಕೂಲತೆಯನ್ನು ಉಂಟುಮಾಡಿತು. ಘಟನೆಯ ಬಗ್ಗೆ ಕಂಪನಿಯು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಶುಕ್ರವಾರವೂ ಜಾಗತಿಕ ಮಟ್ಟದಲ್ಲಿ ಎಕ್ಸ್ ಕೆಲಕಾಲ ಸ್ಥಗಿತಗೊಂಡಿತ್ತು. ಇದರಿಂದ ಹಲವರು ಪರದಾಡಿದರು. ನಂತರ ಎಂದಿನಂತೆಯೇ ಕಾರ್ಯ ಆರಂಭಿಸಿತ್ತು.