ಬೆಂಗಳೂರು : ನವಜಾತ ಶಿಶುಗಳ ಮರಣ ತಪ್ಪಿಸಲು ಮಹತ್ವದ ಯೋಜನೆ - ನೂತನ ಆ್ಯಂಬುಲೆನ್ಸ್‌ಗಳಿಗೆ ಚಾಲನೆ

ಬೆಂಗಳೂರು : ನವಜಾತ ಶಿಶುಗಳ ಮರಣ ತಪ್ಪಿಸಲು ಮಹತ್ವದ ಯೋಜನೆ - ನೂತನ ಆ್ಯಂಬುಲೆನ್ಸ್‌ಗಳಿಗೆ ಚಾಲನೆ

ಬೆಂಗಳೂರು : ನವಜಾತ ಶಿಶುಗಳ ಮರಣ ಪ್ರಮಾಣ ಇಳಿಸಲು ಹಾಗೂ ಶಿಶುಗಳ ತುರ್ತು ಚಿಕಿತ್ಸೆಗಾಗಿ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಹಾಕಿದೆ. ನವಜಾತ ಶಿಶುಗಳ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಾಲ್ಕು ನೂತನ ಶಿಶು ಆ್ಯಂಬುಲೆನ್ಸ್‌ಗಳಿಗೆ ಚಾಲನೆ ನೀಡಿದರು. 

ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ದೂರವಿರುವ ಪ್ರದೇಶಗಳಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಂತಹ ಪ್ರದೇಶಗಳಲ್ಲಿ ವಿಶೇಷ ಅದಕ್ಕೆ ಅಗತ್ಯವಿದ್ದು, ಶಿಶುಗಳ ತುರ್ತು ಚಿಕಿತ್ಸೆಗಾಗಿ ಸುರಕ್ಷಿತವಾಗಿ ಸಾಧಿಸುವಂತಹ ಆ್ಯಂಬುಲೆನ್ಸ್‌ಗಳಿಗೆ ಚಾಲನೆ ನೀಡಲಾಗಿದೆ. ವೆಂಟಿಲೇಟ‌ರ್, ಮೇಲ್ವಿಚಾರಣೆ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ಜೀವ ರಕ್ಷಕ ಸಾಧನಗಳನ್ನು ಈ ಆ್ಯಂಬುಲೆನ್ಸ್‌ ಗಳು ಒಳಗೊಂಡಿವೆ. ರಿಣಿತ ನರ್ಸ್ಗಳು ಆ್ಯಂಬುಲೆನ್ಸ್‌ ನಲ್ಲಿ ಲಭ್ಯವಿರುತ್ತರೆ. 

ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ, ಮೈಸೂರಿನ ಚಲುವಾಂಬ ಆಸ್ಪತ್ರೆ, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ನವಜಾತಾ ಆ್ಯಂಬುಲೆನ್ಸ್‌ ಗಳನ್ನ ನಿಗದಿಪಡಿಸಲಾಗಿದೆ.