ಬೆಂಗಳೂರು: ಸಿಎಂಗೆ ಅಭಿನಂದನೆಗಳ ಸುರಿಮಳೆ: ಕರ್ನಾಟಕ ಬ್ಯಾಂಕ್, ಎಫ್ ಕೆಸಿಸಿಐ ನಿಯೋಗಗಳ ಭೇಟಿ
ಬೆಂಗಳೂರು: ಕರ್ನಾಟಕ ಬ್ಯಾಂಕ್ ಎಂಡಿ ಹಾಗೂ ಸಿಇಒ ರಾಘವೇಂದ್ರ ಶ್ರೀನಿವಾಸ್ ಭಟ್ ನೇತೃತ್ವದ ಕರ್ನಾಟಕ ಬ್ಯಾಂಕ್ ನಿಯೋಗವು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಮಂಗಳವಾರ ಭೇಟಿ ಮಾಡಿ ಅಭಿನಂದಿಸಿತು.
ನಂತರ ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ನೇತೃತ್ವದ ನಿಯೋಗವು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿತ್ತು.ಈ ವೇಳೆ ಉಪಾಧ್ಯಕ್ಷರಾದ ಸಾಯಿರಾಂ, ಶಶಿಧರ್, ಮಾಜಿ ಅಧ್ಯಕ್ಷ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.