ಏಷ್ಯನ್ ಗೇಮ್ಸ್: ಹಾಂಕಾಂಗ್, ಚೀನಾ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತದ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡವು ಏಷ್ಯನ್ ಗೇಮ್ಸ್‌ನ ಪೂಲ್ ಎ ಪಂದ್ಯದಲ್ಲಿ ಹಾಂಕಾಂಗ್, ಚೀನಾ ತಂಡವನ್ನು 13-0 ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಭಾರತ ಮಹಿಳಾ ಹಾಕಿ ಆಟಗಾರ್ತಿಯರಾದ ದೀಪ್ ಗ್ರೇಸ್ ಎಕ್ಕಾ, ದೀಪಿಕಾ ಮತ್ತು ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲು ಗಳಿಸಿದರು. ಸಂಗೀತಾ ಕುಮಾರಿ ಎರಡು ಗೋಲು ಗಳಿಸಿದರೆ, ಮೋನಿಕಾ ಮತ್ತು ನವನೀತ್ ಕೌರ್ ಕೂಡ ಗೋಲು ಗಳಿಸಿದರು. ಭಾರತ ತಂಡವು ತನ್ನ ನಾಲ್ಕು ಗುಂಪಿನ ಪಂದ್ಯಗಳಲ್ಲಿ 33 ಗೋಲುಗಳನ್ನು ಗಳಿಸಿದೆ ಮತ್ತು ಕೇವಲ ಒಂದು ಗೋಲು ಬಿಟ್ಟುಕೊಟ್ಟಿದೆ.