ಇಂದು ಸಿಇಟಿ ಪರೀಕ್ಷೆ ಆರಂಭ, ವಸ್ತ್ರ ಸಂಹಿತೆ ಕಡ್ಡಾಯ

ಇಂದು ಸಿಇಟಿ ಪರೀಕ್ಷೆ ಆರಂಭ, ವಸ್ತ್ರ ಸಂಹಿತೆ ಕಡ್ಡಾಯ

ಬೆಂಗಳೂರು: ಇಂಜಿನಿಯರಿಂಗ್, ದಂತ ವೈದ್ಯಕೀಯ, ಫಾರ್ಮಸಿ ಸೇರಿದಂತೆ ಮತ್ತಿತರ ವೃತ್ತಿ ಪರ ಶಿಕ್ಷಣದ ಕೋರ್ಸ್ ಗಳ ಆಯ್ಕೆ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ- ಸಿಇಟಿ ನಾಳೆಯಿಂದಲೇ ಆರಂಭ. 

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ 'ಕೆಇಎ' ಏಪ್ರಿಲ್ 22, 23 ಮತ್ತು 24 ಸೇರಿದಂತೆ ಮೂರು ದಿನಗಳ ಕಾಲ ನಡೆಯಲಿರುವ ಈ ಬಾರಿಯ ಸಿಇಟಿಗೆ ರಾಜ್ಯಾದ್ಯಂತ ಒಟ್ಟು 745 ಕೇಂದ್ರಗಳನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗಿದ್ದು, 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪಾರದರ್ಶಕ ಮತ್ತು ಯಾವುದೇ ಲೋಪವಿಲ್ಲದಂತೆ ಪರೀಕ್ಷೆ ನಡೆಸಲಾಗುವುದು. ಅದಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಪರೀಕ್ಷಾರ್ಥಿಗಳ ಗುರುತು ಪತ್ತೆಗೆ ಸ್ಕ್ಯಾನಿಂಗ್ ಸಿಸ್ಟಮ್ ಇದೆ. ಇನ್ನು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಲ್ ಟಿಕೆಟ್ ಹೊಂದಿರಬೇಕು. ಈ ಮೊದಲೇ ತಿಳಿಸಿದಂತೆ ಪರೀಕ್ಷೆ ಆರಂಭಕ್ಕೂ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ನೀರಿನ ಬಾಟಲ್, ಮೆಟಲ್ ವಸ್ತುಗಳನ್ನು ತರಬಾರದು. ವಸ್ತ್ರ ಸಂಹಿತೆಯ ಪ್ರಕಾರ ಡ್ರೆಸ್ ಹೊಂದಿರಬೇಕಾದುದು ಅವಶ್ಯವಾಗಿದೆ ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.