ಹುಬ್ಬಳ್ಳಿ: ತ್ವರಿತ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ : ಸಿಎಂ, ಡಿಸಿಎಂಗೆ ಮನವಿ

ಹುಬ್ಬಳ್ಳಿ: ತ್ವರಿತ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ : ಸಿಎಂ, ಡಿಸಿಎಂಗೆ ಮನವಿ

ಹುಬ್ಬಳ್ಳಿ: ಇನಾಂವೀರಾಪುರದಲ್ಲಿ ನಡೆದ ಮಾನಸಳ ಮರ್ಯಾದ ಹತ್ಯೆಗೆ ಸಂಬಂಧಿಸಿದಂತೆ ಸಂತ್ರಸ್ತರ ಕುಟುಂಬಕ್ಕೆ ವಿವಿಧ ಬೇಡಿಕೆ ಈಡೇರಿಸುವಂತೆ ಹಾಗೂ ತ್ವರಿತ ನ್ಯಾಯಾಲಯ ಸ್ಥಾಪನೆ ಕುರಿತು ದಲಿತ ವಿಮೋಚನಾ ಸಮಿತಿಯ ವತಿಯಿಂದ ಸಿಎಂ ಸಿದ್ಧರಾಮಯ್ಯ ಹಾಗೂ ಡಿ‌ಸಿಎಂ ಡಿ‌.ಕೆ‌.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. 

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿದ ದಲಿತ ವಿಮೋಚನಾ ಸಮಿತಿಯ ಮುಖಂಡರು ಘಟನೆಯ ಕುರಿತು ಮನವರಿಕೆ ಮಾಡಿದರು. 

ಸುರೇಶ ಖಾನಾಪುರ, ಕೆಂಚಪ್ಪ ಮಲ್ಲಮ್ಮನವರ, ಶ್ರೀಧರ್ ಕಂದಗಲ್ ನೇತೃತ್ವದಲ್ಲಿ ಸಂತ್ರಸ್ತರ ಕುಟುಂಬ ಸಿಎಂ ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಇನ್ನೂ ಹಾವೇರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಹಾಗೂ ಡಿಸಿಎಂಗೆ ಮನವಿ ಸಲ್ಲಿಸಿದ್ದು, ತ್ವರಿತ ನ್ಯಾಯಾಲಯದ ಸ್ಥಾಪನೆಗೆ ಸರ್ಕಾರ ನೀಡಿರುವ ಆಶ್ವಾಸನೆಯನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.