ರೈತ ಸಂಘದ ನಾಮಫಲಕ ಅನಾವರಣಗೊಳಿಸಿದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ
ಕಲಘಟಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನಾಮಫಲಕವನ್ನು ಅನಾವರಣಗೊಳಿಸಲಾಯಿತು.
ಹನ್ನೆರಡುಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಪೂಜೆ ಸಲ್ಲಿಸಿ ನಾಮಫಲಕವನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ, ರೈತರ ನ್ಯಾಯಯುತವಾದ ಬೇಡಿಕೆಗಳು ಈಡೇರಲು ರೈತರ ಸಂಘಟನೆ ಅವಶ್ಯವಿದೆ. ಸಂಘಟನೆಯನ್ನು ಸರಿಯಾಗಿ ನಡೆಸಿ ರೈತರಿಗೆ ನ್ಯಾಯ ಒದಗಿಸುವಂತೆ ತಿಳಿಸಿದರು.
ತಾಲೂಕಾ ಅಧ್ಯಕ್ಷ ಜ್ಯೋತಿಬಾ ಹುಲಕೊಪ್ಪ, ಉಪಾಧ್ಯಕ್ಷ ಮಂಜುನಾಥ ಬಮ್ಮಿಗಟ್ಟಿ, ಕಾರ್ಯದರ್ಶಿ ಸಿದ್ದನಗೌಡ ಪುರದನಗೌಡರ, ರಾಚನಗೌಡ ಸೋಮನಗೌಡರ, ಮಲ್ಲೇಶ ಮಿರ್ಜಿ ಉಪಸ್ಥಿತರಿದ್ದರು.