ಧಾರವಾಡ: ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಜ್ಞಾನ ಸಿಂಚನ ಎಂಬ ನೇರ ಫೋನ್-ಇನ್ ಕಾರ್ಯಕ್ರಮ
ಧಾರವಾಡ: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಫೆಬ್ರುವರಿ 16 ರಿಂದ ಫೆಬ್ರವರಿ 25 ರವರೆಗೆ ಜ್ಞಾನ ಸಿಂಚನ ಎಂಬ ನೇರ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಫೆಬ್ರವರಿ 16, 18, 20, 23 ಮತ್ತು 25 ರಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರಿಗೆ ಜ್ಞಾನ ಸಿಂಚನ ನೇರ ಫೋನ್-ಇನ್ ಕಾರ್ಯಕ್ರಮ ನಡೆಯುವುದು.
ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢ ಶಾಲೆಗಳಿಗೆ ಈ ಕಾರ್ಯಕ್ರಮದ ಮಾಹಿತಿಯನ್ನು ಒದಗಿಸುವ ಮೂಲಕ ಎಲ್ಲ ಮಕ್ಕಳು ಈ ಕಾರ್ಯಕ್ರಮದ ಗರಿಷ್ಠ ಉಪಯೋಗವನ್ನು ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.