ಲಾರಿ ಮಾಲೀಕರ ಜೊತೆ ಸಚಿವ ರಾಮಲಿಂಗ ರೆಡ್ಡಿ ಸಂಧಾನ ಸಕ್ಸಸ್ : ಮುಷ್ಕರ ವಾಪಸ್
ಕಳೆದ ಮೂರು ದಿನಗಳಿಂದ ಲಾರಿ ಮಾಲೀಕರು ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆದಿದ್ದಾರೆ. ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಲಾರಿ ಮಾಲೀಕರ ಜೊತೆ ನಡೆಸಿಸ ಸಂಧಾನ ಸಕ್ಸಸ್ ಆಗಿದೆ. ಮೊನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿತ್ತು.
ಆದ್ರೆ ಇಂದು ವಿಧಾನಸೌಧದಲ್ಲಿ ಮತ್ತೊಮ್ಮೆ ಲಾರಿ ಮಾಲೀಕರರೊಂದಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಭೆ ಸಫಲವಾಗಿದೆ. ರಾಮಲಿಂಗ ರೆಡ್ಡಿಯೊಂದಿಗೆ ಸಭೆ ಬಳಿಕ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ನಾವು ಮುಷ್ಕರವನ್ನ ಈ ಸಮಯದಿಂದಲೇ ವಾಪಸ್ ಪಡೆಯುತ್ತಿದ್ದೇವೆ. ಸಚಿವರು ಬಹುತೇಕ ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ, 20 ವರ್ಷಗಳಲ್ಲಿ ಈಡೇರದ ಬೇಡಿಕೆ ಸಚಿವ ರಾಮಲಿಂಗಾ ರೆಡ್ಡಿ ಈಡೇರಿಸಿದ್ದಾರೆ.
ಲಾರಿ ಮುಷ್ಕರದಿಂದ ತೊಂದರೆಯಿಂದ ಜನರಿಗೆ ವಿಷಾದ ವ್ಯಕ್ತಪಡಿಸಿದ್ದೇನೆ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ, ಒಂದು ದಿನಕ್ಕೆ ಲಾರಿ ಮುಷ್ಕರದಿಂದ ನಾಲ್ಕುವರೆ ಕೋಟಿ ರುಪಾಯಿ ನಷ್ಟ ಆಗಿದೆ ಎಂದು ತಿಳಿಸಿದರು.