ಸಂಸತ್ ಭವನದೊಳಗೆ ನುಗ್ಗಿದ ದುಷ್ಕರ್ಮಿಗಳು

ಸಂಸತ್ ಭವನದೊಳಗೆ ನುಗ್ಗಿದ ದುಷ್ಕರ್ಮಿಗಳು

ಉತ್ತರ ಪ್ರದೇಶದ ಸಾಗರ್ ಶರ್ಮಾ ಮತ್ತು ಮೈಸೂರಿನ ಡಿ ಮನೋರಂಜನ್, ಪ್ರೇಕ್ಷಕರ ನೆಪದಲ್ಲಿ ಪಾಸ್ ಪಡೆದು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಅಲ್ಲಿಂದ ಕೆಳಕ್ಕೆ ಜಿಗಿದು, ಒಳಗೆ ಹಳದಿ ಬಣ್ಣದ ಹೊಗೆ ಸಿಂಪಡಣೆ ಮಾಡಿದ್ದರು. ಇತ್ತ ಹೊರಗಿದ್ದ ನೀಲಮ್ ಮತ್ತು ಅಮೋಲ್ ಶಿಂಧೆ ಒಬ್ಬರೂ ಕೆಂಪು ಮತ್ತು ಹಳದಿ ಬಣ್ಣದ ಹೊಗೆಯನ್ನು ಹೊತ್ತಿಸಿದ್ದರು. ಈ ಸಂಚಿನಲ್ಲಿ ಭಾಗಿಯಾದ ಐದನೇ ಆರೋಪಿಯನ್ನು ಲಲಿತ್ ಝಾ ಎಂದು ಹೆಸರಿಸಲಾಗಿದೆ. ಗುರುಗಾಂವ್‌ನಲ್ಲಿನ ಈತನ ಮನೆಯಲ್ಲಿಯೇ ಐವರು ಸೇರಿ ಈ ಸಂಚು ರೂಪಿಸಿದ್ದರು ಎಂದು ಮೂಲಗಳು ಹೇಳಿವೆ.