Breaking: 'ಜ್ಞಾನಯೋಗಿ' ಇನ್ನಿಲ್ಲ
ವಿಜಯಪುರ: ವಿಜಯಪುರ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಇಹಲೋಹ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಕಳೆದೆರಡು ದಿನಗಳಿಂದ ತೀವ್ರ ಉಸಿರಾಟ ಸಮಸ್ಯೆಗೂ ತುತ್ತಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ದಿನಕ್ಕೆರಡು ಬಾರಿ ಭಕ್ತಗಣಕ್ಕೆ ದಿವ್ಯ ದರ್ಶನ ನೀಡುತ್ತಿದ್ದ ಆಧ್ಯಾತ್ಮಿಕ ಆಂತರ್ಯ ಉಸಿರು ನಿಲ್ಲಿಸಿದೆ.