ನಾಳೆ (ನ.14) ಡಿ.ಕೆ ಶಿವಕುಮಾರ್ ವಿರಚಿತ 'ನೀರಿನ ಹೆಜ್ಜೆ' ಕೃತಿ ಬಿಡುಗಡೆ

ನಾಳೆ (ನ.14) ಡಿ.ಕೆ ಶಿವಕುಮಾರ್ ವಿರಚಿತ 'ನೀರಿನ ಹೆಜ್ಜೆ' ಕೃತಿ ಬಿಡುಗಡೆ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಚಿಸಿದ 'ನೀರಿನ ಹೆಜ್ಜೆ' ಗ್ರಂಥ ನಾಳೆ ಬಿಡುಗಡೆ ಆಗಲಿದೆ. ರಾಜ್ಯದ ಜಲಸಂಪನ್ಮೂಲ, ಇತಿಹಾಸ, ಸವಾಲುಗಳು ಮತ್ತು ನೀರಿನ ನಿರ್ವಹಣೆಗೆ ಭವಿಷ್ಯದ ಯೋಜನೆಗಳ ಕುರಿತಾಗಿ ರಚಿಸಿರುವ ಪ್ರಬುದ್ಧ ಬರಹಗಳ ಪುಸ್ತಕ ಇದಾಗಿದೆ. 

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಾಳೆ ನವೆಂಬರ್ 14ರ ಸಂಜೆ 4.00 ಗಂಟೆಗೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.