IPL 2024 | CSKvsGT : ಶಿವಂ ಫಿಫ್ಟಿ - ಗುಜರಾತ್‌ಗೆ 207 ರನ್‌ಗಳ ಗುರಿ ನೀಡಿದ ಚೆನ್ನೈ
ಚೆನ್ನೈ: ಶಿವಂ ದುಬೆ, ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಉತ್ತಮ ಆರಂಭದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡಕ್ಕೆ 207 ರನ್‌ಗಳ ಬೃಹತ್ ಗುರಿ ನೀಡಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ತಂಡದ ಪರ ಶಿವಂ ದುಬೆ 51 ರನ್, ನಾಯಕ ಋತುರಾಜ್ ಗಾಯಕ್ವಾಡ್ 46 ರನ್, ರಚಿನ್ ರವೀಂದ್ರ 46 ರನ್, ಡೇರಿಲ್ ಮಿಚೆಲ್ 24 ರನ್ ಗಳಿಸಿದರು.
ಇನ್ನು ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ 2 ವಿಕೆಟ್ ಪಡೆದುಕೊಂಡರೆ, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್ ಹಾಗೂ ಮೋಹಿತ್ ಶರ್ಮಾ ತಲಾ 1 ವಿಕೆಟ್ ಕಿತ್ತರು.